Slider

ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಫೀವರ್ ಸರ್ವೆ:-ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ನಿಯಂತ್ರಿಸಲು ಶೀಘ್ರದಲ್ಲಿ ಕೋವಿಡ್ ಪೀಡಿತರನ್ನು  ಪತ್ತೆ ಹಚ್ಚಿ, ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು ಅಗತ್ಯವಾಗಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಫೀವರ್ ಸರ್ವೇ ಕಾರ್ಯಕ್ರಮ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಇಂದು ನಡೆದ ಸಭೆಯಲ್ಲಿ ತಿಳಿಸಲಾಯಿತು.
    ಸೆಪ್ಟಂಬರ್ ೨೦ ರಿಂದ ೨೨ ರ ವರೆಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡಿ, ಜ್ವರ ಇರುವವರ ಮಕ್ಕಳು, ವೃದ್ದರು ಮತ್ತು ಎಲ್ಲಾ ಸಾರ್ವಜನಿಕರ ಕುರಿತು ಮಾಹಿತಿ ಸಂಗ್ರಹಿಸಿ. ಜ್ವರ ಇದ್ದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಸೋಂಕು ಕಂಡು ಬಂದವರನ್ನು ಆರೋಗ್ಯವಂತರಿಂದ ಪ್ರತ್ಯೇಕಿಸುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಹರಡುವುದನ್ನು  ತಡೆಯಲು ಸಾದ್ಯವಿದೆ. ಸಾರ್ವಜನಿಕರು ಸರ್ವೆ ಸಮಯದಲ್ಲಿ ತಮ್ಮ ಆರೋಗ್ಯ ಕುರಿತು ಅಗತ್ಯ ಮಾಹಿತಿ ನೀಡುವಂತೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರುತ್ತೇನೆ.
    ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡುವಂತೆ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು, ರೋಗ ಲಕ್ಷಣಗಳಿರುವವರು ಮತ್ತು ಪ್ರಯಾಣ ಹಿನ್ನಲೆ ಇರುವವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿ, ಹೋಂ ಐಸೋಲೇಶನ್‌ನಲ್ಲಿ ಇರುವವರು  ಮತ್ತು ಅವರ ಪ್ರಾಥಮಿಕ ಸಂಪರ್ಕಿತರು ಕಂಟೈನ್‌ಮೆಂಟ್ ಝೋನ್ ಹೊರಗೆ ತಿರುಗಾಡದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
    ಪಾಸಿಟಿವ್ ಬಂದ ವ್ಯಕ್ತಿಯ ಸಂಪೂರ್ಣ ವಿವರದ ದಾಖಲೆಗಳನ್ನು ಆತ ವಾಸಿಸುವ ಪ್ರಾಥಮಿಕ ಆರೋಗ್ಯ ಕೆಂದ್ರದ ವ್ಯಾಪ್ತಿಯಲ್ಲಿ ಸಂಗ್ರಹಿಸುವಂತೆ, ಆತನನ್ನು ಪರೀಕ್ಷಿಸಿದ ದಿನಾಂಕ. ರೋಗ ಲಕ್ಷಣಗಳು, ಆರೋಗ್ಯ ಸ್ಥಿತಿಗತಿ, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ  ದಾಖಲಿಸಿದ ಕುರಿತ ವಿವರಗಳು, ಗುಣಮುಖನಾದ ದಿನಾಂಕ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು  ಸಂಗ್ರಹಿಸಿಡುವಂತೆ ಸಹ ಸೂಚಿಸಲಾಯಿತು.
    ಲಸಿಕೆ ನೀಡುವ ಸಮಯದಲ್ಲಿ ಪ್ರತಿಯೊಂದು ಗ್ರಾಮ ಮತ್ತು ವಾರ್ಡ್ ಗಳಲ್ಲಿ ಲಸಿಕೆ ಪಡೆಯಲು ಬಾಕಿ ಇರುವವರು  ಮಾಹಿತಿ ಸಂಗ್ರಹಿಸಿ, ಬಾಕಿ ಇರುವ  ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ನೀಡಲು  ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಿ, ಲಸಿಕಾ ಅಭಿಯಾನ ಏರ್ಪಡಿಸುವಾಗ  ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸ್ವ-ಸಹಾಯ ಸಂಘಗಳ ನೆರವು ಪಡೆಯುವಂತೆ ಸೂಚಿಸಲಾಯಿತು. 
     ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನ ವರದಿಯಾಗುವ ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ, ಅವರನ್ನು ಪರೀಕ್ಷೆಗೆ ಒಳಪಡಿಸುವಂತೆ, ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಅಲ್ಲದೇ ಔಷಧ ಅಂಗಡಿಗಳಿಂದ ಕೋವಿಡ್ ರೋಗ ಲಕ್ಷಣಗಳಿಗೆ ಔಷಧ ಖರೀದಿಸುವವರ ಕುರಿತ ಸಹ ಮಾಹಿತಿ ಸಂಗ್ರಹಿಸಿ ಅವರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಲಾಯಿತು.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo